ಶ್ರೀಮದ್ ಗಿರಿರಾಜ ಸೂರ್ಯ ಸಿಂಹಾಸನಾಧೀಶ್ವರರಾದ ಶ್ರೀ ಶ್ರೀಶೈಲ ಜಗದ್ಗುರು ಜಡೆಯಶಂಕರ ಶಿವಾಚಾರ್ಯ ಭಗವತ್ಪಾದರು ರಾಮಭಾಪುರಿ ವೀರಸಿಂಹಾಸನ ಪೀಠಾರೋಹಣ ಕಾರ್ಯಕ್ಕೆ ಆಗಮಿಸಿದರು

ಭಕ್ತರ ಕೋರಿಕೆಯಂತೆ ಈ ಸ್ಥಳದಲ್ಲಿ ಅರಳಿ ಮರವನ್ನು ಚಿಗುರಿಸಿ, ತನ್ನ ಜನ್ಮದೃಷ್ಟಿ ನೀಡಿದರು. ಆ ಕಾರಣದಿಂದ ಈ ಪ್ರದೇಶಕ್ಕೆ ಹೊನ್ನಾಳಿ ಎಂಬ ಹೆಸರು ಪ್ರಸಿದ್ಧಿಯಾಯಿತು.

ಶ್ರೀ ಚನ್ನಮಲ್ಲಿಕಾರ್ಜುನರು ಸುಮಾರು ಮೂರು ನೂರು ವರ್ಷಗಳವರೆಗೆ ಜೀವಿಸಿ, ಈ ಭಾಗದಲ್ಲಿ ಮಹೋನ್ನತ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು. ದೊಡ್ಡ ಕಲ್ಲಿನಿಂದ ನಿರ್ಮಿಸಿದ ಭವ್ಯ ಗುರುಮಠ ಹಾಗೂ ಗದ್ದಿಗೆ ಮಠವನ್ನು ನಿರ್ಮಿಸಿದರು.

ಕಾರ್ಮಿಕರಿಗೆ ಸಮರ್ಪಕ ಕೂಲಿ ವ್ಯವಸ್ಥೆ ಮಾಡಿದರು. “ಚನ್ನಪ್ಪಸ್ವಾಮಿಯ ಕೂಲಿ” ಎಂಬ ನಾಣ್ಣುಡಿ ಇಂದಿಗೂ ಪ್ರಸಿದ್ಧವಾಗಿದೆ.

 ಪೀಠಾಧಿಪತಿಗಳು

ಶ್ರೀ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರೆಗೆ 16 ಜನ ಗುರುವರ್ಯರು ಧರ್ಮಪೀಠವನ್ನು ಅಲಂಕರಿಸಿದರು.

ಪ್ರಸ್ತುತ 17ನೇ ಪೀಠಾಧಿಪತಿಗಳಾಗಿ 07-06-2015 ರಂದು ಶ್ರೀ ಷಡ್ಬ್ರಹ್ಮ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಗುರುಪೀಠವನ್ನು ಅಲಂಕರಿಸಿದ್ದಾರೆ.